The words you are searching are inside this book. To get more targeted content, please make full-text search by clicking here.
Discover the best professional documents and content resources in AnyFlip Document Base.
Search
Published by Shrigandha Digital, 2024-02-20 09:25:17

ಇಗೋ ಕನ್ನಡ

ಇಗೋ ಕನ್ನಡ

(| ಆ. (1 ಅಗೋ ಕನ್ನಡ ಇದನ್ನು ಅರ್ಥಕೋಶ ಅಥವಾ ನಿಘಂಟು ಎಂದೇ ತಿಳಿಯಬೇಕಾಗಿಲ್ಲ ಓದಿದಾಗ ಮುದ ಕೊಡುವ ಇದರ ವ್ಯಾಪಕತೆ ಒಂದು ಪದಕ್ಕೆ ಅರ್ಥ ನೀಡುವಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಪದದ ಅರ್ಥ ಹುಡುಕುತ್ತ ಅದರ ಬೇರು, ಕಾಂಡ ರೆಂಬೆ-ಕೊಂಬೆ ಇತ್ಯಾದಿಗಳ ಮೂಲ ಶೋಧಿಸಿ, ಬಳಕೆಯಲ್ಲಿ ಅದು " ಹೇಗೆಲ್ಲ ಬದಲಾವಣೆಗೊಳ ಗಾಗಿದೆ ಎಂಬುದನ್ನು ಪತ್ತೆ ಮಾಡುವ, ಅಂತೆಯೇ ಭಾಷಾಜ್ಞಾನದ ಹಾಗೂ “ಭಾಷೆ ಷೆಯ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಕ್ರಿಯಾಶೀಲವಾದ ಪರಿಶ್ರಮ ಪಃ ಕೃತಿಗೆ ಹನ್ನೆಲೆಯಾಗಿದೆ. ಅರ್ಥದ ಬೆನ್ನೇರಿ ಸಂಚರಿಸುವಾಗ ಜನ ಸಾಮಾನ್ಯರ ನುಡಿಗಟ್ಟಿನ ಜತೆಗೆ ಸಂಸ್ಕೃತ ಕಾವ್ಯಗಳ, ಹಳೆಗನ್ನಡ, ನಡುಗನ್ನಡ ಅಧುನಿಕ ಕನ್ನಡದ ಗದ್ಯ ಪದ್ಧಗಳಲ್ಲದೆ ಅಲ್ಲಲ್ಲ ವ್ಯಾಕರಣದ . ಪರಿಚಯ ಮಾಡಿಕೊಡುತ್ತ, ಅನ್ಕದೇಶ್ವ ಪದಗಳು ನಮ್ಮ ನುಡಿಗಟ್ಟಿನಲ್ಲಿ' ನುಸುಳಿಕೊಂಡು, ತಮ್ಮ ನೆಲೆಯನ್ನು ಖಾಯಂಗೊಳಿಸಿಕೊಂಡ ಪರಿಯ ರೋಚಕ ಅನುಭವ ನೀಡುವ ಪು ಪಸ್ತಕ ಇದು. ಹಾಗಾಗಿ ಬೇರೆಲ್ಲ ನಿಘಂಟು ಗಳಿಗಿಂತ "ಇಗೋ ಕನ್ನಡ'ಕ್ಕೆ ಹೆಚ್ಚಿನ ಮಹತ್ವ. ಮನೆ ಗಳಲ್ಲಿ ಶಾಲೆಗಳಲ್ಲಿ, ಗ್ರಂಥಾಲಯಗಳಲ್ಲಿ ಇರಲೇ ಬೇಕಾದ ಪುಸ್ತಕ ಇದು. ತಿಳಿವಳಿಕೆಯ ಪರಿಧಿಯನ್ನು ವಿಸ್ತರಿಸುವ ಭಾಷೆ, ಸಾಮಾಜಿಕ ಸೌಹಾರ್ದತೆಯನ್ನೂ ಕಾಪಿಡುವ ತನ್ನ ಕ್ರಿಯೆಯಲ್ಲಿ ಇತರ ಭಾಷೆಗಳಿಂದ ಕೊಡು- ಕೊಳ್ಳು ಮಾಡಿಕೊಳ್ಳುತ್ತಾ ತಾನೂ ಬೆಳೆಯುತ್ತದೆ. "ಕನ್ನಡ ಭಾಷೆಯಲ್ಲಿ "ಆಸ್ಯದೇಶ್ಯ ಶಬ್ದಗಳು' ಹಾಗೂ "ದೇಶ್ಯ ಶಬ್ದಗಳು' ನಮ್ಮ "ಭಾಷೆಯನ್ನು ಶ್ರೀಮಂತಗೊಳಿಸಿವೆ. ಇವುಗಳನ್ನೆಲ್ಲ ಓದುಗರು ಪ್ರೊ! ಜಿ ವೆಂಕಟಸುಬ್ಬಯ್ಯ ನವರ ಈ ಗ್ರಂಥದಲ್ಲಿ ತಿಳಿಯಬಹುದು.


pe ಬ್‌ ಬ್ಲ ಡ್ನ ಬ್ರ ೯ಟಕ ; ವಿದ್ಯೆ, ಎದ್ವತ್ತು ಸೃಜನಶೀಲ ಪ್ರತಿಭೆ ಮತ್ತು ವಿನಯಗಳಿಂದ ಕೂಡಿದ ಹಳೆಯ ತಲೆಮಾರಿನ ಸಾರಸ್ಪತಲೋಕದ ವಿಶಿಷ್ಟ ಮಾದರಿಗೆ ಓಂದು ಜೀವಂತ ನಿದರ್ಶನ ಪ್ರೂ।ಜಿ. ವೆಂಕಟಸುಬ್ಬಯ್ಯನವರು. ವಂಶವಾಹಿಯಾಗಿ ವಿದ್ವತ್ತನ್ನು ಬಳುವಳಿಯಾಗಿ ಪಡೆದ ವೆಂಕಟಸುಬ್ಬಯ್ಯನವರು ಸ್ವಂತ ಅಧ್ಯಯನ, ಬೋಧನೆ, ಸಂಶೋಧನೆಗಳಿಂದ ಗುಪ್ತಗಾಮಿ ಯಾಗಿ ರಕ್ತ ದೊಳಗಿದ್ದ ಈ ಆಜ್ಯವನ್ನು ಹೊತ್ತಿಸಿ, ಪ್ರಜ್ವಲಿಸುವಂತೆ ಮಾಡಿ ಅದನ್ನು ಶಿಖೆಯಲ್ಲಿ "ವಿದ್ಯಾಲಂಕಾರ'ವಾಗಿ ಮುಡಿದವರು; ಸಾವಿರಾರು ಜನ ಶಿಷ್ಟರಿಗೆ, ಸಾಹಿತ್ಯ ಪಿಪಾಸುಗಳಿಗೆ ಜ್ಞಾನ ದೀವಿಗೆಯಾದವರು. ವೆಂಕಟಸುಬ್ಬಯ್ಯನವರ ಪ್ರತಿಭೆಯ ಆಯಾಮಗಳು ಹಲವಾರು. ಈ ಸೃಜನಶೀಲ ಪ್ರತಿಭೆಗೆ ವಿದ್ವತ್ತಿನ ಸ್ಪರ್ಶವೂ ಕೂಡಿದಾಗ ಹಲವಾರು ಕುಡಿಗಳು ಕೊನರಿದವು. ಇಂಥ ಕುಡಿಗಳಲ್ಲಿ ಕನ್ನಡ ನಿಘಂಟು ದಾಂಗುಡಿ ಇಟ್ಟು ಒಂದು ಮಹಾವೃಕ್ಷ ವಾಗಿಯೇ ಬೆಳೆದುಇಂದು ಕನ್ನ ಡಿಗರ ಮನೆಮನೆಗಳಲ್ಲಿ ಬೆಳಗುತ್ತಿ ದೆ. ಎಂ. ಎ. ಪದವಿಯಲ್ಲಿ ಸುವರ್ಣಪದಕ ವಿಜೇತರಾಗಿ ಕಾಲೇಜಿನಿಂದ ಹೊರಬಂದ ವೆಂಕಟಸುಬ್ಬಯ್ಯನವರು ನಲವತ್ತು ವರ್ಷಗಳ ಕಾಲ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ದುಡಿದು ಅದಕ್ಕೆ ಹೆಗಲೆಣೆಯಾಗಿಯೇ ಕನ್ನಡ ನುಡಿಯ ಕೆಲಸಗಳಲ್ಲಿ ಅಹರ್ನಿಶಿ ಕ್ರಿಯಾಶೀಲರಾಗಿ ಯುವಪೀಳಿಗೆಗೆ ಮೇಲ್ಬ್ಪಂಕ್ತಿಯಾಗಿ ನಿಂತವರು. ಕನ್ನಡ ನುಡಿಯ ಅರ್ಥ, ಅಂತರಾರ್ಥಗಳನ್ನು, ಅದರ ಆಜು-ಬಾಜುಗಳನ್ನು ಆಳ-ವಿಸ್ತಾ ರಗಳನ್ನು ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ ಕೆಲವೇ ವಿದ್ವಾಂಸರಲ್ಲಿ ವೆಂಕಟಸುಬ್ಬಯ್ಯನವರು ಅಗ್ರಗಣ್ಯರು. ಚಲನಶೀಲವಾದ ಭಾಷೆಯ ಜೊತೆಗೇ ಲೇಖಕನಾದವನು ಬೆಳೆಯುತ್ತಾನೆ ಎಂಬುದಕ್ಕೆ ಸ್ಫಟಿಕಸದೃಶ ನಿದರ್ಶನ ವೆಂಕಟಸುಬ್ಬಯ್ಯನವರು. ಪ್ರತಿಭಾನ್ವಿತನ ಕೈಯಲ್ಲಿ ಎಷ್ಟು ಸಮರ್ಥವಾಗಿ ವಾಚ್ಯಾರ್ಥ ಧ್ವನ್ಯರ್ಥಗಳಿಂದ ಕೂಡಿ ಹೇಗೆ ಮಾತು ಮಾಣಿಕ್ಕವಾಗ ಬಲ್ಲದು ಎಂಬುದನ್ನು ಅಂಗೈನೆಲ್ಲಿಯಂತೆ ಸ್ಪಷ್ಟವಾಗಿ ತೆರೆದಿಟ್ಟು ಅವರು ನಿಮ್ಮನ್ನು ವಿಸ್ಮಯಗೊಳಿಸುತ್ತಾರೆ. ಎಂದೇ ಅವರ "ಇಗೋ ಕನ್ನಡ' ನಮ್ಮ ಅತ್ಯಂತ ಜನಪ್ರಿಯ ಅಂಕಣ. ಐದು ವರ್ಷಗಳಿಂದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ನುಡಿಮಾಲೆ ಯಾಗಿ ಕಂಗೊಳಿಸುತ್ತಾ ಸಹಸ್ರಾರು ಜನರ ಭಾಷಾಜ್ಞಾನದ ಎಲ್ಲೆಗಳನ್ನು ವಿಸ್ತರಿಸುತ್ತಿರುವ ಈ ಅಂಕಣದ ಬರಹಗಳು ಈಗ ಪುಸ್ತಕ ರೂಪದಲ್ಲಿ ಬಂದು ಕನ್ನಡಿಗರ ಮನೆಗಳನ್ನು ಅಲಂಕರಿಸಲಿರುವುದು, ಮನಗಳನ್ನು ಬೆಳಗಿಸಲಿರುವುದು ನಮಗೆ ಹೆಮ್ಮೆಯ ವಿಚಾರ, ಸಂತೋಷದ ಸಂಗತಿ. | ಜಿ. ಎನ್‌. ರಂಗನಾಥ ರಾವ್‌ ಸಹ-ಸಂಪಾದಕರು, ಪ್ರಜಾವಾಣಿ, ಬೆಂಗಳೂರು ISBN 81-7302-275-5 ಸಾನ


Click to View FlipBook Version